ಮಲಗಿದ್ದೆ ನಾನಂದು, ಛಕ್ಕನೆ ಕುಳಿತೆದ್ದೆ,
ಬೆಚ್ಚಿದೆ ಪಕ್ಕದಲಿ ಕುಳಿತವನ ಕಂಡು.
"ಬೇರೆ ಯಾರೂ ಅಲ್ಲ, ನಿನ್ನದೇ ಆತ್ಮ,
ಬಂದಿಹೆನು ನಾ ನಿನ್ನ ಜೊತೆ ಮಾತನಾಡಲು."
ಬೆದರಿದ ಹರಿಣಿಯಂತೆ, ತೊದಲಿ ನಾ ಉಸುರಿದೆ,
"ಹೇಳು, ನಿನ್ನ ಮಾತು ಕೇಳಲು ನನಗೆ ಭಯವಿಲ್ಲ".
ಅದಕ್ಕೆ ಉತ್ತರವಾಗಿ ನನ್ನಾತ್ಮ ಹೀಗೆಂದು ಉತ್ತರಿಸೆ,
"ಹುಟ್ಟಿನಿಂದಲೇ ನಾನು ನಿನ್ನೊಳಗೆ ಅಡಗಿಹೆನು,
ನಿನ್ನ ಸಾಧನೆಗಳಿಗೆಲ್ಲ ಪ್ರೇರಕನು ನಾನೇ.
ಬಳಪದಲಿರುವ ಬೆಳಕು ತೋರಿಸಿದವ ನಾನು,
ಬಾಳ ಬಳಪವ ತೇಯ್ದವನು ನಾ.
ನಿನ್ನದೆನುವದೇನುಂಟು ? ನಿನ್ನೆದೆಯಲೇನುಂಟು?
ಚೈತನ್ಯನು ನಾ ನಿನಗೆ."
ನಾನಲ್ಲ ಮನಮೋಹನ, ಹೆದುರುವೆನೆ ಸುಶ್ಮಾತ್ಮಕೆ,
ಗರ್ವದಿ ಉತ್ತರಿಸಿದೆ,
"ಹೌದು. ಎಲ್ಲವು ನಿನ್ನದೇ. ನನ್ನದೇನೂ ಇಲ್ಲ.
ಈ ಕ್ಷಣವೇ ನಿಲಿಸುವೆನು ಈ ನನ್ನ ಉಸಿರ,
ತೆಗೆದುಕೋ ಈ ನನ್ನ ಬಿರುದು, ಆ ಕಂಠಿಸರ".
Subscribe to:
Comments (Atom)
