"ಕಳ್ಳೆಕಾಯಿ, ಕಳ್ಳೆಕಾಯಿ, ಬುಧ್ಧಿಜೀವಿ ಕಳ್ಳೆಕಾಯಿ, ಎಲ್ಲಾ ಬುಧ್ಧಿಜೀವಿಗಳು ಇದೇ ಕಳ್ಳೆಕಾಯಿ ತಿನ್ನೋದು.ಯಾರಿಗ ಬೇಕು? "
"ಜಬ್ ಮಿಯಾ ಬೀವಿ ಹೋ ರಾಜಿ , ತೋ ಕ್ಯಾ ಕರೇಗಾ ಖಾಜಿ !"
ಈ ಶೀರ್ಷಿಕೆಗೆ ೨೦೧೦ ರ ಉತ್ತಮ ಶೀರ್ಷಿಕೆ ಬಂದರೆ ಅದಕ್ಕೆ ಅಚ್ಚರಿ ಪಡಬೇಡಿ. ಇದು ನಮ್ಮ ನೆಚ್ಚಿನ ಸಿಂಹರ ಲೇಖನ( ೨೭/೦೩/೨೦೧೦)ದ ಶೀರ್ಷಿಕೆ.
ಸಿಂಹಕ್ಕೆ ಮತ್ತೊಂದು ಗರಿ(!). ಆದರೆ ಅವರ ಲೇಖನವನ್ನು ಜೀರ್ಣಿಸಿಕೊಳ್ಳೋದು ಸ್ವಲ್ಪ ಕಷ್ಟ.ಜೀರ್ಣಿಸಿಕೊಂಡರೆ ಹೊಟ್ಟೆ ಕೆಡುತ್ತೆ!.
ಜಗತ್ತಿಗೆ ಸಂಸ್ಕೃತಿ ಮತ್ತು ಸಂಭಂಧದ ಪರಿಕಲ್ಪನೆ ಕೊಟ್ಟಿದ್ದೇ ನಾವು.ಅಸಂಭದ್ದ ಮತ್ತು ಅಶ್ಲೀಲತೆಯನ್ನು ಮೈಗೂಡಿಸಿಕೊಂಡ ಎಷ್ಟೋ ನಾಗರಿಕತೆಗಳು ಮಣ್ಣಾಗಿದ್ದನ್ನು ನಾವು ನೋಡಬಹುದು. ಇಷ್ಟಕ್ಕೂ ನಮ್ಮ ಸಿಂಹ ಏನು ಹೇಳ್ತಾರೆ? " ಹುಡುಗ ಹುಡುಗಿಯರು ತಮ್ಮ ಗುರಿ ಸಾಧನೆಗೆ ಬೇಗ ಮದುವೆಯಾಗೋಲ್ಲ. ಕೆಲವು ಜನ ಪಟ್ಟಣಕ್ಕೆ ಅಥವಾ ದೂರದ ಊರಿಗೆ ಓದಲು ಹೋಗುತ್ತಾರೆ. ಹಾಸ್ಟೆಲ್ಲುಗಳಲ್ಲಿ ಉಳಿಯುತ್ತಾರೆ. ಹುಡುಗ ಹುಡುಗಿಯರ ಮಧ್ಯೆ ಸ್ನೇಹ ಬೆಳೆಯುತ್ತದೆ.ದೈಹಿಕ ಕಾಮನೆಗಳು ಅವರ ಸ್ನೇಹಡ ತಳಹದಿ ಮೇಲೆ ಮೊಳಕೆಯೊಡೆಯುತ್ತವೆ. ಮಾಗಿದ ವಯಸ್ಸು ಅದಕ್ಕೆ ಕಾರಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಮತ್ತು ಅದನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಇಂದು ನಮ್ಮ ಮುಂದಿದೆ".
ಡಾರ್ವಿನ್ ಥಿಯರಿಯಷ್ಟು ಕರಾರುವಾಕ್. ಅಲ್ಲ ಸಿಂಹ ಅವರೇ, ಹೀಗಂತ ಇಡೀ ಯುವಸಮೂಹವನ್ನು ತಪ್ಪು ದಾರಿಗೆಳೆಯುವದೆ? ಯಾವುದೇ ಅಡ್ಡಿಗಳಿಲ್ಲದೆ ಯುವ ಸಮೂಹ ಹಗ್ಗ ಬಿಚ್ಚಿದ ಎಮ್ಮೆ ಕೋಣಗಳಾದಾವು.ಭಾವನೆಗಳನ್ನು,ನೋವು ನಲಿವುಗಳನ್ನು ಹಂಚಿಕೊಂದಲ್ಲಿ ಅದನ್ನು ಸ್ನೇಹವೆಂದು ಹೇಳಬಹುದು. ಒಂದು ಹೆಜ್ಜೆ ಮುಂದೆ ಹೋದಲ್ಲಿ ಅದನ್ನು ಪ್ರೀತಿ ಎನ್ನಬಹುದು. ಇನ್ನೂ ಒಂದು ಹೆಜ್ಜೆ ಇಟ್ಟಲ್ಲಿ ಅದನ್ನು ಮದುವೆ ಎನ್ನಬಹುದು. ಈ ಎರಡನೇ ಮತ್ತು ಮೂರನೆ ಹೆಜ್ಜೆಗಳ ನಡುವೆ ದಾರಿ ತಪ್ಪಿದರೆ ಅದನ್ನು ಎಡವಟ್ಟು ಎನ್ನಬಹುದು,ಅಥವಾ ವಿವಾಹಪೂರ್ವ ಸಂಭಂಧ ಎನ್ನಬಹುದು. ಅದನ್ನೇ ನಮ್ಮ ಸರಕಾರ ಈಗ ಸಮ್ಮತಿಸಿದೆ. ಈ ಸಂಭಂಧಕ್ಕೆ ನಮ್ಮ ಶಬ್ದಕೋಶದಲ್ಲಿ ಉತ್ತಮ ಶಬ್ದಗಳೇ ಇಲ್ಲ.
ಅಲ್ಲಾ ಸ್ವಾಮಿ, ಈಗಲೇ ನಾವು ಈ ವಿಭಕ್ತ ಕುಟುಂಬಗಳಿಂದ ಅನುಭವಿಸುತ್ತಿರೋದೆ ಸಾಕು. ತಂದೆ, ತಾಯಿ, ಅಜ್ಜ, ಅಜ್ಜಿ, ಅತ್ತೆ, ಮಾವ ಮುಂತಾದ ಸಂಭಂಧಗಳೇ ಕಡಿಮೆಯಾಗುತ್ತಿರುವ ದಿನಗಳಲ್ಲಿ ಈ ಅವ್ಯಕ್ತ ಕುಟುಂಬಗಳಿಂದ ಆಗುವ ಸಂಸ್ಕೃತಿ ನಾಶಕ್ಕೆ ಹೊಣೆ ಯಾರು? ಎಲ್ಲಾರು ಮೂಳೆ ಕಡೀತಾರಾ? ಇನ್ಮೇಲೆ ಕಡಿದವರೆಲ್ಲ ಮೂಳೆ ಹಾರ ಮಾಡ್ಕೊಂಡು ಸಂಭ್ರಮಿಸಬೇಕು. ಜಗತ್ತಿನ ಜನ ನಮ್ಮ ಸಂಸ್ಕೃತಿಯ ಅವನತಿಯನ್ನು ನೋಡಿ ನಗಬೇಕು. ಇದೇ ಅಲ್ವೇ ಅಭಿವೃದ್ಧಿಯ ಸಂಕೇತ. ಅವ್ರು ಮಾಡ್ತಾರೆ, ನಾವೂ ಮಾಡೋಣ. ಏನು ಹುಚ್ಚು ಸ್ವಾಮಿ. ಶಿಕ್ಷಣದಲ್ಲಿ ನೈತಿಕತೆ, ಮಾನವೀಯತೆ, ಸಂಸ್ಕೃತಿ,ಮತ್ತು ಅವಿಭಕ್ತ ಕುಟುಂಬಗಳಿಂದ ಆಗುತ್ತಿದ್ದ ಉಪಯೋಗಗಳನ್ನು ಅಳವಡಿಸಿ ಮತ್ತೆ ಸಂಸ್ಕೃತಿ ಸೌಧವನ್ನು ಕಟ್ಟಬೇಕೆ ಹೊರತು ಇಂತಹ ಹೊಲಸು ಕಾನೂನುಗಳನ್ನಲ್ಲ .www.divorcerate.org ರವರ ಸರ್ವೇ ಪ್ರಕಾರ ಅಮೇರಿಕದಲ್ಲಿ ಶೇ ೫೦% ವಿವಾಹಗಳು ಮುರಿಯುತ್ತವೆ. ಆದರೆ ನಮ್ಮಲ್ಲಿ ಕೇವಲ ಶೇ.೧%. ಇದೂ ಕೂಡ ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗಿದ್ದು. ನಮ್ಮ ಮನೆ ನಮ್ಮ ಮೊದಲ ಪಾಠಶಾಲೆ. ಅಲ್ಲಿಂದ ನಾವು ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಪ್ರಯತ್ನ ಮಾಡೋಣ.
ಒಬ್ಬ ಪತ್ರಕರ್ತ ಬರೀ ಅಂಕಿ ಅಂಶ, ಉತ್ತಮ ಶಬ್ದಜೋಡಣೆಯಿಂದ ಲೇಖನ ಬರೆದಲ್ಲಿ ಆಗುವ ಅನಾಹುತಗಳಿವು. ಬರೀ ರೋಚಕತೆಗೆ ಆಯುಷ್ಯ ಅಲ್ಪ ಮತ್ತು ಅಪಾಯಕಾರಿ. ಪ್ರತಿಯೊಂದು ಲೇಖನ, ಕವಿತೆ, ಕತೆ, ಕಾದಂಬರಿ ಹಿಂದೆ ಸಂವೇದನೆ ಮುಖ್ಯ. ಒಬ್ಬ ಲೇಖಕ ಓದುಗನ ಅಭಿರುಚಿಯನ್ನು ಉತ್ತಮವಾಗಿಸಬೇಕು. ಇಲ್ಲವಾದಲ್ಲಿ ಅವನಿಗೂ ಕಸಬ್ ಗೂ ಯಾವುದೇ ವ್ಯತ್ಯಾಸವಿಲ್ಲ. ಕಸಬ್ ಕೇವಲ ಬೆರಳೆಣಿಕೆಯಷ್ಟು ಜನರನ್ನು ದೈಹಿಕವಾಗಿ ಕೊಂದ. ಇವರೋ ಇಡೀ ಒಂದು ಸಮಾಜವನ್ನು ಹೊಲಸು ಮಾಡುತ್ತಾರೆ. ವಿಚಾರವಾದಿಗಳೇ, ಲೇಖಕರೇ, ಪತ್ರಕರ್ತರೇ, ಬುಧ್ಧಿಜೀವಿಗಳೇ ಕಡ್ಲೇಕಾಯಿ ತಿಂದಿದ್ದು ಸಾಕು. ನೀವೆನಂತೀರಿ?