ಅವನ ಖಾಸಗಿ ವಿಷಯವನ್ನೇ ನಾವು ಪರಿಗಣಿಸುವದಾದರೆ, ಶಾರುಖ್ ಯಾವತ್ತೂ ಒಬ್ಬ ಪರಿಣಿತ ರಾಜಕಾರಣಿಯಂತೆ ಗೋಚರಿಸುತ್ತಾನೆ. ಅವನು ಹಿಂದೆಯೂ ಹಿಂದೂ ಮತ್ತು ಮುಸ್ಲಿಮರ ಮನಸನ್ನು ಸೆಳೆಯಲು ಪ್ರಯತ್ನಿಸಿದ್ದಾನೆ. ಅದಕ್ಕೆ ಉತ್ತಮ ಉದಾಹರಣೆಯೆಂದರೆ ಅವನು ಗೌರಿಯನ್ನು ಮದುವೆಯಾಗಿದ್ದು.. ಅವಳನ್ನು ಮದುವೆಯಾಗಿ ಹಿಂದೂ -ಮುಸ್ಲಿಂ ಭಾವೈಕ್ಯತೆಯನ್ನು ಎಲ್ಲರ ಹೃದಯದಲ್ಲಿ ಅಂಕಿತ ಮಾಡಿದ್ದರೂ, ಗೌರಿ, ಗೌರಿಖಾನ್ ಆದದ್ದರ ಬಗ್ಗೆ ನಾವು ಮರೆತಿದ್ದೇವೆ.ಅವನ ಇತ್ತೀಚಿನ MY NAME IS KHAN ಚಿತ್ರವನ್ನೇ ಪರಿಗಣಿಸಿದಲ್ಲಿ ಅವನ ಈ ಮುಖ ತೋರುವದರಲ್ಲಿ ಸಂಶಯವಿಲ್ಲ.
ಇಂತಹ ಶಾರುಖ್ ತನ್ನ ಸಾರ್ವಜನಿಕ ಹೇಳಿಕೆಗಳಿಂದ ನಮ್ಮ ಮನಸ್ಸನ್ನು ಘಾಸಿಗೊಳಿಸುವದು ಸರಿಯಲ್ಲ. ಒಂದೊಮ್ಮೆ ಶೋಯಬ್ ಮಲ್ಲಿಕ್, ಈಗ ಪಾಕಿಸ್ತಾನದ ಪರವಾದ ಹೇಳಿಕೆಗಳು ಅವನ ಅಭಿಮಾನಿಗಳಾದ ನಮಗೆ ಗಾಬರಿಗೊಳಿಸಿವೆ. ಕ್ರೀಡೆ, ಸಾಹಿತ್ಯ, ಕಲೆ, ವಿಜ್ಞಾನ,ತಂತ್ರಜ್ಞಾನ,ಇವುಗಳು ಆಯಾ ದೇಶಗಳ ಪ್ರತಿಬಿಂಬ. ಸ್ವದೇಶಾಭಿಮಾನವನ್ನು ಬದಿಗಿಟ್ಟು ಆಡುವ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಕ್ರೀಡೆ ನಮಗೆ ಬೇಡ. ಅವು ನಮ್ಮ ರಾಷ್ಟ್ರದ ಹಿತಕ್ಕೆ ಮುಳ್ಳುಗಳು.
ಇಂತಹ ಶಾರುಖ್ಗೆ ನಮ್ಮ ಪ್ರತಾಪಸಿಂಹ ತುಂಬಾ ಮೊನಚಾಗಿ,ಅರ್ಥಬಧ್ಧ್ದವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ. ಎಷ್ಟೋ ದಿನಗಳ ನಂತರ ಸಿಂಹರ ಒಂದು ಉತ್ತಮ ಲೇಖನ ('ಬೆತ್ತಲೆ ಜಗತ್ತು' , ವಿಜಯ ಕರ್ನಾಟಕ ದಿ.೨೭-೦೨-೨೦೧೦) ಓದಿದ ಅನುಭವ ನನಗಾಯಿತು. ಸಿಂಹರ ಪ್ರಶ್ನೆಗಳು ಯಾವುದೇ ಒಬ್ಬ ಭಾರತೀಯನು ನಮ್ಮ ಶತ್ರುರಾಷ್ಟ್ರಗಳನ್ನು ಬೆಂಬಲಿಸಲಾರದಂತೆ ಎಚ್ಚರಿಸುತ್ತವೆ.ಯಾರೋ ಹೇಳಿದ ನೆನಪು, "ಎಲ್ಲ ಮುಸ್ಲಿಮರೆಲ್ಲ ಉಗ್ರರಲ್ಲ, ಆದರೆ ಎಲ್ಲ್ಲ ಉಗ್ರರು ಮುಸ್ಲಿಮರು, ಇದು ಕಾಕತಾಳೀಯ". ಕೊನೆಯದಾಗಿ, ಶಾರುಖ್ ಇದು ಸರಿಯೇ?
"The Brother hood of Islam is not the universal brotherhood of a man. It is the brotherhood of muslims for muslims only"---Dr.B.R.Ambedkar (Referred By Mr.PratapSimha in his article).
* ಸಿಂಹರ ಈ ಲೇಖನ Pdf ರೂಪದಲ್ಲಿ ಲಭ್ಯವಿದ್ದು, ಓದಲು ಇಚ್ಚಿಸುವವರು download ಮಾಡಿಕೊಳ್ಳಬಹುದು.
Download Link:http://gururaj1234.pbworks.com